Project Guidelines

I. ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು:-

(ಅ) ರೈತರಿಗೆ ಅಲ್ಪಾವಧಿ ಕೋಳಿ ಸಾಕಾಣಿಕಾ ತರಬೇತಿ ಕಾರ್ಯಕ್ರಮ:-

  1. ಈ ಯೋಜನೆಯಡಿ ರೈತರಿಗೆ ವೈಜ್ಞಾನಿಕ ಕೋಳಿ ಸಾಕಾಣಿಕೆಯಲ್ಲಿ ತರಬೇತಿ ನೀಡುವ ಸಂಬಂಧದ 5 ದಿನಗಳ ಅವಧಿಯ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.
  2. ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಪ್ರಾದೇಶಿಕ ಕೇಂದ್ರ ಸ್ಥಾನದಲ್ಲಿ ಆಯೋಜಿಸುವುದು, ಅವಶ್ಯಕತೆ ಬಿದ್ದಲ್ಲಿ ಇತರೇ ಜಿಲ್ಲಾ ಕೇಂದ್ರಗಳಲ್ಲೂ ಸಹ ಆಯೋಜಿಸಲು ಕ್ರಮ ಕೈಗೊಳ್ಳುವುದು.
  3. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ, ಬೆಂಗಳೂರು ಇವರು ಪ್ರತಿ ಪ್ರಾದೇಶಿಕ ಕೇಂದ್ರಗಳ ಅಧಿಕಾರಿಗಳಿಗೆ ಜಿಲ್ಲಾವಾರು ಗುರಿಗಳನ್ನು ನಿಗಧಿಪಡಿಸುವರು.
  4. ಪ್ರತಿ ಮಾಹೆ ನಡೆಸಲಾಗುವ ತರಬೇತಿ ಕಾರ್ಯಕ್ರಮದ ದಿನಾಂಕಗಳನ್ನು ಮುದ್ರಣ ಮಾಧ್ಯಮದಲ್ಲಿ ಜಾಹೀರಾತು ಪ್ರಕಟಣೆ ನೀಡುವ ಮೂಲಕ ತರಬೇತಿ ಕಾರ್ಯಕ್ರಮದ ಆಯೋಜನೆಯ ಕುರಿತು ವ್ಯಾಪಕ ಪ್ರಚಾರ ನೀಡಿ, ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದಲ್ಲಿ ನಿಗಧಿತ ನಮೂನೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಅಭ್ಯರ್ಥಿಗಳನ್ನು ನೋಂದಣಿ ಮಾಡಿಕೊಳ್ಳುವುದು.
  5. ಸರ್ಕಾರದಲ್ಲಿ ಚಾಲ್ತಿಯಲ್ಲಿರುವ ನಿಯಮಗಳಿಗನುಸಾರ ತರಬೇತಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಮೀಸಲಾತಿ ನಿಯಮವನ್ನು ಕಟ್ಟು ನಿಟ್ಟಾಗಿ ಅನುಸರಿಸುವುದು.
  6. ತರಬೇತಿ ಅವಧಿಯಲ್ಲಿ ತರಬೇತಿಯಲ್ಲಿ ಪಾಲ್ಗೊಳ್ಳುವ ಪ್ರತಿ ಅಭ್ಯರ್ಥಿಗೆ ಊಟೋಪಚಾರ/ ವಾಸ್ತವ್ಯ/ ಇತ್ಯಾದಿ ವೆಚ್ಚಗಳ ಬಾಬ್ತು ದಿನವೊಂದಕ್ಕೆ ರೂ.250/- ರಂತೆ ಪ್ರೋತ್ಸಾಹ ಧನವನ್ನು ತರಬೇತಿ ಕಾರ್ಯಕ್ರಮದ ಅಂತ್ಯದಲ್ಲಿ ನೀಡುವುದು.
  7. ತರಬೇತಿಗೆ ಸಂಬಂಧಿಸಿದಂತೆ ತರಬೇತಿ ಕಿಟ್ ಅನ್ನು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ವತಿಯಿಂದ ಒದಗಿಸುವುದು.
  8. ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಪ್ರಾದೇಶಿಕ ಅಧಿಕಾರಿಗಳು ಆಯಾ ಜಿಲ್ಲೆಗಳಲ್ಲಿನ ಕೃಷಿ ನಿರ್ವಹಣಾ ಸಂಸ್ಥೆಯ (ಆತ್ಮ) ವಿಸ್ತರಣಾ ಕಾರ್ಯಕರ್ತರ ಸಹಯೋಗದೊಂದಿಗೆ ತರಬೇತಿ ಅಭ್ಯರ್ಥಿಗಳ ಆಯ್ಕೆಗೆ ಕ್ರಮ ಕೈಗೊಳ್ಳಬೇಕು ಹಾಗೂ ಮಹಾಮಂಡಳದ ಪ್ರಾದೇಶಿಕ ಕೇಂದ್ರ ಇರುವ ಜಿಲ್ಲೆ ಹೊರತುಪಡಿಸಿ, ಇತರೆ ಜಿಲ್ಲೆಗಳಲ್ಲಿ ಆತ್ಮ ಸಂಸ್ಥೆಯ ಅಧಿಕಾರಿಗಳು / ಕಾರ್ಯಕರ್ತರು ತರಬೇತಿ ಸ್ಥಳದ ವ್ಯವಸ್ಥೆ ಕಲ್ಪಿಸುವುದು.
  9. ತರಬೇತಿ ನೀಡುವ ತರಬೇತಿದಾರರಿಗೆ ರೂ.600/-ಗಳ ಗೌರವಧನವನ್ನು ನೀಡುವುದು.

II. ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ವತಿಯಿಂದ ಅನುಷ್ಠಾನಗೊಳ್ಳುವ ನಿರುದ್ಯೋಗಿ ಯುವಕ /ಯುವತಿಯರಿಗೆ ಮಾಂಸದ ಕುಕ್ಕುಟ ಕ್ಷೇತ್ರಗಳ ಸ್ಥಾಪಿಸುವ ಸಲುವಾಗಿ ಸಹಾಯಧನದ ಯೋಜನೆಯ ಕುರಿತು ಮಾರ್ಗಸೂಚಿಗಳು:-

  • ಈ ಯೋಜನೆಯಡಿ ಜಿಲ್ಲಾವಾರು ಗುರಿಗಳನ್ನು ಸರ್ಕಾರದಲ್ಲಿ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳಗನುಸಾರವಾಗಿ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳೆಯರಿಗೆ ಮೀಸಲಾತಿಯನ್ನು ಒದಗಿಸುವುದು.
  • ಜಿಲ್ಲಾವಾರು ಗುರಿಗಳನ್ನು ರಾಜ್ಯಮಟ್ಟದ ಬ್ಯಾಂಕರ್‍ಗಳ ಸಮಿತಿಯ ಮುಖಾಂತರ ಸಂಬಂಧಪಟ್ಟ ಜಿಲ್ಲೆಗಳ ಸೇವಾ ಬ್ಯಾಂಕುಗಳಿಗೆ ತಿಳಿಯಪಡಿಸಲಾಗುವುದು.
  • ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಪ್ರಾದೇಶಿಕ ಕೇಂದ್ರಗಳ ಅಧಿಕಾರಿಗಳು ಈ ಯೋಜನೆಗೆ ವ್ಯಾಪಕ ಪ್ರಚಾರ ನೀಡುತ್ತಾರೆ ಮತ್ತು ಸಂಬಂಧಪಟ್ಟ ಬ್ಯಾಂಕ್ ಮತ್ತು ಫಲಾನುಭವಿಗಳ ಮಧ್ಯೆ ಸಂಪರ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಾರೆ.
  • ಈ ಕೆಳಕಂಡ ಆಯ್ಕೆ ಸಮಿತಿಯು ಫಲಾನುಭವಿಗಳನ್ನು ಆಯ್ಕೆ ಮಾಡುವುದು:-
    1. ಸಂಬಂಧಪಟ್ಟ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು – ಅಧ್ಯಕ್ಷರು.
    2. ಸಂಬಂಧಪಟ್ಟ ತಾಲ್ಲೂಕಿನ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರು - ಸದಸ್ಯರು.
    3. ಸಂಬಂಧಪಟ್ಟ ಜಿಲ್ಲೆಯ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ, ಪ್ರಾದೇಶಿಕ ಅಧಿಕಾರಿ - ಸದಸ್ಯ ಕಾರ್ಯದರ್ಶಿ.
  • ಫಲಾನುಭವಿಯು ಘಟಕ ಸ್ಥಾಪನೆಗಾಗಿ ಸಹಾಯಧನ ಪಡೆದಿದ್ದ ಪಕ್ಷದಲ್ಲಿ ಮುಂದಿನ ಐದು ವರ್ಷಗಳವರೆಗೆ ಸಹಾಯಧನ ಪಡೆಯುವ ಕುರಿತು ಅರ್ಜಿ ಸಲ್ಲಿಸುವಂತಿಲ್ಲ.
  • ಫಲಾನುಭವಿಗಳನ್ನು ಆಯ್ಕೆ ಮಾಡಿದ ನಂತರ, ನಿಗಧಿಪಡಿಸಿದ ಅರ್ಜಿ ನಮೂನೆ ಮತ್ತು ದಾಖಲೆಗಳನ್ನು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ,ಪ್ರಾದೇಶಿಕ ಕೇಂದ್ರಗಳ ಅಧಿಕಾರಿಗಳು ಫಲಾನುಭವಿಗಳಿಂದ ಪಡೆಯಬೇಕು ನಂತರ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ ಅಧಿಕಾರಿ / ಸಿಬ್ಬಂದಿ ಅಥವಾ ಸ್ಥಳೀಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿ / ಸಿಬ್ಬಂದಿ ಫಲಾನುಭವಿಯು ಘಟಕ ಸ್ಥಾಪನೆ ಮಾಡಲು ಉದ್ದೇಶಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು, ಸ್ಥಳ ಪರಿಶೀಲನೆ ನಡೆಸಿದ ನಂತರ ಸ್ಥಳ ಪರಿಶೀಲನಾ ವರದಿ ಹಾಗೂ Feasibility ರಿಪೋರ್ಟ್‍ನ್ನು ಈ ಮೇಲ್ಕಂಡ ಆಯ್ಕೆ ಸಮಿತಿಗೆ ಸಲ್ಲಿಸಿ, ಆಯ್ಕೆ ಸಮಿತಿಯ ಅನುಮೋದನೆ ಪಡೆದು ನಂತರ ಅರ್ಜಿಯನ್ನು ಕೇಂದ್ರ ಕಛೇರಿಗೆ ಶಿಫಾರಸ್ಸು ಮಾಡತಕ್ಕದ್ದು.
  • ಈ ಯೋಜನೆಯಡಿ ಘಟಕದ ವೆಚ್ಚ ರೂ.1,60,000=00 (ರೂಪಾಯಿ ಒಂದು ಲಕ್ಷದ ಆರವತ್ತು ಸಾವಿರ ಮಾತ್ರ) ಆಗಿದ್ದು, ವಿವಿಧ ವರ್ಗಗಳ ಫಲಾನುಭವಿಗಳಿಗೆ ನೀಡಲಾಗುವ ಸಹಾಯಧನದ ಮೊತ್ತ, ಬ್ಯಾಂಕುಗಳು ನೀಡಬೇಕಾದ ಸಾಲದ ಮೊತ್ತ ಈ ಕೆಳಕಂಡಂತಿರುತ್ತದೆ.

(ರೂ. ಗಳಲ್ಲಿ)

ಕ್ರ ಸಂ

ಫಲಾನಭವಿ ವರ್ಗ

ಬ್ಯಾಂಕ್‍ನವರು ನೀಡುವ ಸಾಲದ ಮೊತ್ತ

ಸಹಾಯಧನದ ಮೊತ್ತ

ಒಟ್ಟು ಘಟಕದ ಮೊತ್ತ

ಫಲಾನುಭವಿಗಳ ಸಂಖ್ಯೆ

1.

ಸಾಮಾನ್ಯ ವರ್ಗ

1,20,000

40,000

1,60,000

263

2.

ಪ.ಜಾತಿ/ಪ.ಪಂಗಡ

80,000

80,000

1,60,000

75

  • ಈ ಯೋಜನೆಯನ್ನು ರಾಷ್ಟ್ರೀಕೃತ / ಸಹಕಾರಿ / ಷೆಡ್ಯೂಲ್ ಬ್ಯಾಂಕುಗಳ ಮುಖಾಂತರ ಮಾತ್ರ ಯೋಜನೆಯನ್ನು ಅನುಷ್ಠಾನಗೊಳಿಸಬೇಕು.
  • ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ, ಬೆಂಗಳೂರು ಇಲ್ಲಿ ನೊಂದಣಿಯಾಗಿರುವ ಪ್ರಾಥಮಿಕ ಕೋಳಿ ಸಾಕಾಣಿಕಾ ಸಹಕಾರ ಸಂಘಗಳ ಸದಸ್ಯರಿಗೆ ಆದ್ಯತೆ ನೀಡಲಾಗುವುದು.
  • ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಪ್ರಾದೇಶಿಕ ಅಧಿಕಾರಿಗಳು ಸಂಬಂಧಿಸಿದ ಜಿಲ್ಲೆಗಳಿಗೆ ನಿಗಧಿಪಡಿಸಿದ ಗುರಿಗಳಿಗನುಗುಣವಾಗಿ ಫಲಾನುಭವಿಗಳ ಆಯ್ಕೆಯ ನಂತರ, ಫಲಾನುಭವಿಗಳಿಂದ ಅರ್ಜಿಗಳನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಪಡೆದುಕೊಂಡು ಬ್ಯಾಂಕ್‍ಗೆ ನೀಡಬೇಕು.
  • ಸಂಬಂಧಿಸಿದ ಸಾಲ ನೀಡುವ ಬ್ಯಾಂಕ್‍ಗಳು ಫಲಾನುಭವಿಗೆ ಸಾಲ ಮಂಜೂರು ಮಾಡುವ ಕುರಿತು ಧೃಢೀಕರಣ ನೀಡಬೇಕು.
  • ಸಹಾಯಕ ನಿರ್ದೇಶಕರು, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ,ಪ್ರಾದೇಶಿಕ ಕೇಂದ್ರ, ರಾಯಾಪುರ, ಧಾರವಾಡ / ಬೆಳಗಾವಿ / ಕಲಬುರಗಿ / ಮೈಸೂರು ಹಾಗೂ ಕೇಂದ್ರ ಕಛೇರಿ, ಬೆಂಗಳೂರು ರವರು ಅರ್ಜಿದಾರರು ಕಳೆದ 5 ವರ್ಷಗಳ ಅವಧಿಯಲ್ಲಿ ಮಂಡಳಿಯಿಂದ ಯಾವುದೇ ಸಹಾಯಧನವನ್ನು ಪಡೆದಿರುವುದಿಲ್ಲವೆಂದು ದೃಢೀಕರಿಸತಕ್ಕದ್ದು.
  • ಸಹಾಯಕ ನಿರ್ದೇಶಕರು, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ,ಪ್ರಾದೇಶಿಕ ಕೇಂದ್ರ, ರಾಯಾಪುರ, ಧಾರವಾಡ / ಬೆಳಗಾವಿ / ಕಲಬುರಗಿ / ಮೈಸೂರು ಹಾಗೂ ಕೇಂದ್ರ ಕಛೇರಿ ಬೆಂಗಳೂರು ರವರು ತಮ್ಮ ಅಧೀನದಲ್ಲಿ ಬರುವ ಫಲಾನುಭವಿಗಳ ಅರ್ಜಿ ಮತ್ತು ದಾಖಲಾತಿಗಳನ್ನು ಪರಿಶೀಲನೆ (Scrutiny) ಮಾಡಿ ತಮ್ಮ ಹಂತದಲ್ಲಿಯೇ ಸರಿಪಡಿಸಿ ತಡೆಪಟ್ಟಿ (ಚೆಕ್ ಲಿಸ್ಟ್) ಯೊಂದಿಗೆ ಈ ಕಛೇರಿಗೆ ಸಲ್ಲಿಸಬೇಕೆಂದು ಸೂಚಿಸಿದೆ.
  • ಈ ಕಛೇರಿಯಿಂದ ಮಂಜೂರಾತಿ ಆದೇಶ ನೀಡಿದ ನಂತರ ಪ್ರಾದೇಶಿಕ ಕೇಂದ್ರ, ಸಹಾಯಕ ನಿರ್ದೇಶಕರು ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆ ಮಾಡುವ ಮುಂಚೆ ಅವರಿಂದ ನಾಮ ಸದಸ್ಯತ್ವ (Nominal Membership) ಅರ್ಜಿಯನ್ನು ಭರ್ತಿ ಮಾಡಿ ರೂ.1200/- ಮೊತ್ತವನ್ನು ಕಟ್ಟಿಸಿಕೊಂಡ ನಂತರ ಸಹಾಯಧನವನ್ನು ಬಿಡುಗಡೆ ಮಾಡುವುದು ಹಾಗೂ ಸದರಿ ಮೊತ್ತದ ಚೆಕ್/ಡಿ.ಡಿಯನ್ನು ಈ ಕಛೇರಿಗೆ ನೀಡುವುದು.
  • ಸಹಾಯಧನ ಬಿಡುಗಡೆ ಮಾಡಿದ ಮೇಲೆ ಈ ಕಛೇರಿಗೆ ಸಹಾಯಧನ ಬಿಡುಗಡೆ ವಿವರವನ್ನು ಸಲ್ಲಿಸುವುದು.
  • ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿಯಮಿತವು ಸಹಾಯಧನದ ಮೊತ್ತವನ್ನು ನೇರವಾಗಿ ಬ್ಯಾಂಕಿಗೆ ಬಿಡುಗಡೆ ಮಾಡುವುದು.
  • ಬ್ಯಾಂಕ್‍ನವರು ಅವಶ್ಯ ದಾಖಲೆಗಳನ್ನು ಪರಿಶೀಲಿಸಿದ ನಂತರ ಸಾಲದ ಮಂಜೂರಾತಿ ನೀಡಬೇಕು,
  • ನಂತರ ಬ್ಯಾಂಕ್‍ನವರು ಫಲಾನುಭವಿಗೆ ಒಟ್ಟು ಘಟಕದ ವೆಚ್ಚವನ್ನು ಎರಡು ಹಂತದಲ್ಲಿ ಬಿಡುಗಡೆ ಮಾಡಬೇಕು, ಮೊದಲನೆ ಹಂತದಲ್ಲಿ ಅನಾವರ್ತಕ ವೆಚ್ಚಗಳು ರೂ.90,000/- ಗಳನ್ನು ಬಿಡುಗಡೆ ಮಾಡುವುದು ಮೊದಲನೇ ಕಂತಿನ ಸಹಾಯಧನ ಸದ್ವಿನಿಯೋಗವಾದ ನಂತರ ಎರಡನೇ ಆವರ್ತಕ ವೆಚ್ಚ ರೂ.70,000/- ಗಳನ್ನು ಯೋಜನೆಯ ಪ್ರಗತಿಗನುಗುಣವಾಗಿ ಬಿಡುಗಡೆಗೊಳಿಸಬೇಕು.
  • ಯೋಜನೆಯ ಅನುಷ್ಠಾನದ ಅನುಪಾಲನೆಯನ್ನು ಇಲಾಖೆಯ ಜಿಲ್ಲಾ ಉಪನಿರ್ದೇಶಕರು, ತಾಲ್ಲೂಕಾ ಸಹಾಯಕ ನಿರ್ದೇಶಕರು, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ, ಪ್ರಾದೇಶಿಕ ಸಹಾಯಕ ನಿರ್ದೇಶಕರು ಹಾಗೂ ಬ್ಯಾಂಕ್ ಅಧಿಕಾರಿಗಳು ಮಾಡುವುದು.
  • ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ ಮೂಲಕ ಫಲಾನುಭವಿಯು ಸಹಾಯಧನ ಪಡೆದ ಫಲಾನುಭವಿಯು ಸಹಾಯಧನ ಪಡೆದ ವರ್ಷ ಹಾಗೂ ಮೊತ್ತದ ವಿವರವನ್ನು ಕೋಳಿ ಸಾಕಾಣಿಕೆಯ ಮನೆಯ ಗೋಡೆಯ ಮೇಲೆ ಪ್ರದರ್ಶಿಸಬೇಕು.
  • ಸಹಾಯಧನ ವಿನಿಯೋಗವಾದ ನಂತರ ಬ್ಯಾಂಕಿನವರು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಕ್ಕೆ ಸದ್ವಿನಿಯೋಗ ಪ್ರಮಾಣ ಪತ್ರ ನೀಡಬೇಕು.
  • ಪ್ರಾದೇಶಿಕ ಕೇಂದ್ರದ ಸಹಾಯಕ ನಿರ್ದೇಶಕರುಗಳ / ತಾಲ್ಲೂಕು ಸಹಾಯಕ ನಿರ್ದೇಶಕರುಗಳು ಸಹಾಯಧನ ಸದ್ವಿನಿಯೋಗವಾದ ನಂತರ ಸಂಬಂಧಪಟ್ಟ ಬ್ಯಾಂಕುಗಳಿಂದ ಸದ್ವಿನಿಯೋಗ ಪ್ರಮಾಣ ಪತ್ರವನ್ನು (ಯು.ಸಿ) ಪಡೆದು ಹಾಗೂ ಘಟಕದ ಭಾವಚಿತ್ರಗಳೊಂದಿಗೆ ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ಬೆಂಗಳೂರು ಇವರಿಗೆ ಸಲ್ಲಿಸುವುದು.
  1. ಅರ್ಜಿ ನಮೂನೆಯ ಜೊತೆಯಲ್ಲಿ ಫಲಾನುಭವಿಯು ಸಲ್ಲಿಸಬೇಕಾದ ದಾಖಲೆಗಳ ವಿವರಗಳು:
    ಅ) ಇತ್ತೀಚಿನ 3 ಭಾವಚಿತ್ರಗಳು.
    ಆ) ಭಾವಚಿತ್ರ ಸಹಿತದ ಗುರುತಿನ ಚೀಟಿ, ಅರ್ಜಿ ಮತ್ತು ದಾಖಲಾತಿಗಳನ್ನು ಕಡ್ಡಾಯವಾಗಿ ತ್ರಿಪ್ರತಿಯಲ್ಲಿ (3 sets) ಸಲ್ಲಿಸುವುದು. ಹಾಗೂ ಮಾಹಿತಿಯನ್ನು ನಿಗಧಿತ ನಮೂನೆಯಲ್ಲಿ ಸ್ಪಷ್ಟವಾಗಿ ತುಂಬಿಸಿರಬೇಕು.
    ಇ) ಎಲ್ಲಾ ನಕಲು ಪ್ರತಿಯ ಅರ್ಜಿಗಳನ್ನು ಹಾಗೂ ದಾಖಲಾತಿಗಳನ್ನು ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ ರವರು ದೃಢೀಕರಿಸಿರಬೇಕು.
    ಈ) ವಿಳಾಸದ ದೃಢೀಕರಣದ ದಾಖಲೆ (ಆಧಾರ್ ಕಾರ್ಡ ಕಡ್ಡಾಯವಾಗಿ ಸಲ್ಲಿಸಬೇಕು / ಮತದಾರರ
    ಗುರುತಿನ ಚೀಟಿ / ಕುಟುಂಬ ಪಡಿತರ ಚೀಟಿ ಇತ್ಯಾದಿ)
    ಉ) ಪ.ಜಾತಿ/ಪ.ಪಂಗಡಕ್ಕೆ ಸೇರಿದ ಫಲಾನುಭವಿಗಳು ದಾಖಲೆಗಳ ಜೊತೆಗೆ ಜಾತಿ ಮತ್ತು ಆದಾಯದ ಪ್ರಮಾಣ ಪತ್ರ ಒದಗಿಸಬೇಕು.
    ಊ)ಕೋಳಿ ಫಾರಂ ಕಟ್ಟಲು ಸ್ವಂತ ಜಮೀನು ಹೊಂದಿದ್ದಲ್ಲಿ ಆ ಜಮೀನಿನ ಉತಾರ (ಆರ್.ಟಿ.ಸಿ ಮೂಲ ಪ್ರತಿ) ಅಥವಾ ಸ್ವಂತ ಜಮೀನು ಹೊಂದಿಲ್ಲದಿದ್ದ ಪಕ್ಷದಲ್ಲಿ ಕೋಳಿ ಫಾರಂ ಕಟ್ಟಲು ಉದ್ದೇಶಿಸಿರುವ ಜಮೀನಿನ ಮಾಲೀಕರಿಂದ ರೂ.100/- ಸ್ಟ್ಯಾಂಪ್ ಪೇಪರ್‍ನಲ್ಲಿ ಒಪ್ಪಿಗೆ ಪತ್ರ ಮತ್ತು ಆ ಮಾಲೀಕರ ಜಮೀನಿನ ಉತಾರ (ಆರ್.ಟಿ.ಸಿ ಮೂಲ ಪ್ರತಿ) ಹಾಗೂ ಒಪ್ಪಿಗೆ ಪತ್ರದಲ್ಲಿ ನೋಟರಿ ಮಾಡಿಸಿರಬೇಕು.
    ಋ) ಕುಕ್ಕುಟ ಕ್ಷೇತ್ರ ಸ್ಥಾಪನೆ ಮಾಡುವ ಸ್ಥಳದ ಬಗ್ಗೆ ಸಂಬಂಧಿಸಿದ ಪಂಚಾಯಿತಿ ಕಾರ್ಯದರ್ಶಿ/ ಅಭಿವೃದ್ಧಿ ಅಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರ.
    ಋು) ಕೋಳಿ ಸಾಕಾಣಿಕೆಯಲ್ಲಿ ತರಬೇತಿ ಹೊಂದಿದ್ದರೆ, ತರಬೇತಿ ಪ್ರಮಾಣ ಪತ್ರ.
    ಎ)ಸಹಾಯಧನ ಪಡೆಯುವ ಸಂಬಂಧದ (Pre-Receipt) ನಮೂನೆಯಲ್ಲಿ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಪ್ರಾದೇಶಿಕ ಕೇಂದ್ರಗಳ ಅಧಿಕಾರಿಯ ಹಾಗೂ ಸಾಲ ನೀಡುವ ಬ್ಯಾಂಕಿನ ಅಧಿಕಾರಿಯವರ ಸಹಿ ಹಾಗೂ ಮೊಹರು ಹಾಕಿರಬೇಕು.

III. ವಿಸ್ತರಣೆ ಮತ್ತು ಪ್ರಚಾರ:-

  1. ರೈತರಿಗೆ ಅಧ್ಯಯನ ಪ್ರವಾಸ ಕಾರ್ಯಕ್ರಮ:-
     ಕೋಳಿ ಸಾಕಾಣಿಕೆಯಲ್ಲಿ ಆಸಕ್ತಿ ಹೊಂದಿರುವ 250 ರೈತರನ್ನು ಅಧ್ಯಯನ ಪ್ರವಾಸಕ್ಕಾಗಿ
    ಪರಿಗಣಿಸುವುದು.
     ಅಧ್ಯಯನ ಪ್ರವಾಸಕ್ಕಾಗಿ ರೈತರನ್ನು ಮಹಾಮಂಡಳದ ಪ್ರಾದೇಶಿಕ ಕೇಂದ್ರಗಳ ಅಧಿಕಾರಿಗಳು ಸಂಬಂಧಿಸಿದ ಜಿಲ್ಲೆಗಳ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರ ಸಹಯೋಗದೊಂದಿಗೆ ಆಯ್ಕೆ ಮಾಡುವುದು.
     ಅಧ್ಯಯನ ಪ್ರವಾಸದ ಅವಧಿ ಭೇಟಿ ನೀಡುವ ಸ್ಥಳದ ದೂರದ ಆಧಾರದ ಮೇಲೆ 1-2 ದಿನಗಳ ಅವಧಿಯದಾಗಿರುವುದು.
     ಅಧ್ಯಯನ ಪ್ರವಾಸದ ಕಾರ್ಯಕ್ರಮದಲ್ಲಿ ಸುಮಾರು 250 ಆಸಕ್ತ ರೈತರಿಗೆ ರಾಜ್ಯದಲ್ಲಿರುವ /
    ಹೊರರಾಜ್ಯದಲ್ಲಿರುವ ಸರ್ಕಾರದ ಕುಕ್ಕುಟ ಕ್ಷೇತ್ರಗಳು/ ಕೇಂದ್ರ ಸರ್ಕಾರದ ಕುಕ್ಕುಟ ಕ್ಷೇತ್ರಗಳು / ಆಧುನಿಕ ಖಾಸಗಿ ಕೋಳಿ ಫಾರಂಗಳಿಗೆ ಕುಕ್ಕುಟ ಸಂಶೋಧನಾ ಸಂಸ್ಥೆಗಳಿಗೆ ಭೇಟಿ ಏರ್ಪಡಿಸುವುದು.
     ಅಧ್ಯಯನ ಪ್ರವಾಸದ ಸಂಧರ್ಭದಲ್ಲಿ ರೈತರ ಊಟೋಪಚಾರ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸುವುದು.
  2. (2) 2017-18ನೇ ಸಾಲಿನಲ್ಲಿ ಮಹಾಮಂಡಳದಲ್ಲಿ ಹೊಸದಾಗಿ ಸದಸ್ಯತ್ವ ಪಡೆದ ಸಂಘಗಳಿಗೆ ಅನುದಾನ.
    2017-18ನೇ ಸಾಲಿನಲ್ಲಿ ಮಹಾಮಂಡಳದಲ್ಲಿ ಹೊಸದಾಗಿ ಸದಸ್ಯತ್ವ ಪಡೆಯುವ “ಎ” ವರ್ಗದ ಸಂಘಗಳಿಗೆ ರೂ.1.00 ಲಕ್ಷದವರೆಗೆ ಆರ್ಥಿಕ ನೆರವು ನೀಡುವುದು.
    (1) ಸದರಿ ಯೋಜನೆಯು ಹೊಸದಾಗಿ ನೊಂದಣಿಯಾದ ಸಹಕಾರ ಸಂಘಗಳಿಗೆ ಮಾತ್ರ ಅನ್ವಯಿಸುತ್ತದೆ. ಕಾರಣ ಶೈಶವದಲ್ಲಿರುವ ಬಾಲ್ಯಾವಸ್ಥೆ ಸಂಘವನ್ನು ಆರ್ಥಿಕವಾಗಿ ಬಲಪಡಿಸಿ ಸಂಘದ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದಾಗಿರುತ್ತದೆ ಹಾಗೂ ಕುಕ್ಕುಟ ಸಹಕಾರ ಸಂಘಗಳ ಸ್ಥಾಪನೆ ಉತ್ತೇಜಿಸಲಾಗುತ್ತದೆ.
    (2) ಈ ಯೋಜನೆಯಡಿ ಮಂಜೂರಾಗುವ ಅನುದಾನವನ್ನು ಬಳಸಿಕೊಳ್ಳುವ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವುದು ಆಯಾ ಸಂಘದ ಆಡಳಿತ ಮಂಡಳಿಯೇ ನಿರ್ಣಯಿಸಬೇಕಾಗಿರುತ್ತದೆ. ಆದರೆ ಅಂಥಹ ಕಾರ್ಯಕ್ರಮಗಳು ಈ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು.
    (ಎ) ಯೋಜನೆ ಕಾರ್ಯಕ್ರಮಗಳು ಸದಸ್ಯರ ಹಿತಾಸಕ್ತಿಗೆ ಪೂರಕವಾಗಿರತಕ್ಕದ್ದು.
    (ಬಿ) ಸಂಘವನ್ನು ಆರ್ಥಿಕವಾಗಿ ಸಬಲಗೊಳಿಸತಕ್ಕದ್ದು.
    (ಸಿ) ಕುಕ್ಕುಟ ಉದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಪೂರಕವಾಗಿರತಕ್ಕದ್ದು.
    (ಡಿ) ಸದರಿ ಅನುದಾನದ ಪೈಕಿ ಶೇ.80 ಸಂಘದ ಚಟುವಟಿಕೆಗೂ ಶೇ.20 ಪೀಠೋಪಕರಣಗಳಿಗೂ -* ಉಪಯೋಗಿಸಬಹುದು.
    ಈ ಮೇಲಿನ ಅಂಶಗಳು ಒಳಗೊಂಡಿತಕ್ಕದ್ದು ಅಂಥಹ ಪ್ರಸ್ತಾವೆ ತಿರಸ್ಕರಿಸುವ ಅಧಿಕಾರ ಮಹಾ ಮಂಡಳಕ್ಕೆ ಇರುತ್ತದೆ.
    (3) ಆಡಳಿತ ಮಂಡಳಿಯು ಸಭೆ ಸೇರಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ವಿವರಗಳನ್ನು ಈ ಕೆಳಗಿನಂತೆ ದಾಖಲಿಸಿ ಪೂರ್ಣ ನಡವಳಿಗಳನ್ನು ಮಹಾಮಂಡಳಕ್ಕೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ದೃಢೀಕರಿಸಿ ಕಳುಹಿಸತಕ್ಕದ್ದು.

ಕ್ರಸಂ

ಕಾರ್ಯಕ್ರಮದ ವಿವರ

ಅಂದಾಜು ವೆಚ್ಚ

 

 

 

ಸಭಾ ನಡವಳಿಗಳು ಸ್ವೀಕೃತವಾದ ನಂತರ ಅರ್ಹ ಕಾರ್ಯಕ್ರಮಗಳ ಅಂದಾಜು ವೆಚ್ಚ ಅಥವಾ ರೂ.1.00 ಲಕ್ಷ ಯಾವುದು ಕಡಿಮೆಯೋ ಅಷ್ಟನ್ನು ಮಂಜೂರು ಮಾಡಲಾಗುವುದು. ಆಯಾ ಸಂಘದ ನಿರ್ಣಯದಂತೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸದರಿ ಸಂಘದ ಕಾರ್ಯ ನಿರ್ವಾಹಕರದಾಗಿದ್ದು ಮೇಲ್ವಿಚಾರಣೆಯ ಜವಾಬ್ದಾರಿ ಆಡಳಿತ ಮಂಡಳಿಯದ್ದಾಗಿರುತ್ತದೆ, ಲೋಪದೋಷಗಳಾದಲ್ಲಿ ಸಂಬಂಧಿಸಿದವರ ಮೇಲೆ ಕಾನೂನು ರೀತ್ಯಾ ಕ್ರಮಕೈಗೊಳ್ಳುವ ಅಧಿಕಾರ ಮಹಾಮಂಡಳಕ್ಕೆ ಇರುತ್ತದೆ.

ಅನುದಾನವನ್ನು ಯಶಸ್ವಿಯಾಗಿ ಬಳಸಿಕೊಂಡು ಅರ್ಥಿಕ ಸಬಲತೆ ಸಾಧಿಸಿದ ಸಂಘಗಳಿಗೆ ಇನ್ನಿತರ ಯೋಜನೆಯಡಿ ಆಯ್ಕೆಯಾಗುವ ಆದ್ಯತೆ ನೀಡಲಾಗುವುದು.

ಆದ್ದರಿಂದ, ಸಂಘ/ಸದಸ್ಯ ಹಿತಾಸಕ್ತಿ ಗಮನಹರಿಸಿಕೊಂಡು ಜವಾಬ್ದಾರಿಯುತವಾಗಿ ಪ್ರಸ್ತಾವೆ ಕಳುಹಿಸಿಕೊಡುವುದು.

ಪ್ರಸ್ತಾವೆಯು ಸಂಘದ ಕೋರಿಕೆ ಪತ್ರ, ಸಭಾ ನಡವಳಿಗಳು, ಸಂಘದ ನೊಂದಣಿ ಪ್ರಮಾಣ ಪತ್ರದ ಪ್ರತಿ, ಚುನಾಯಿತ ದೃಢೀಕೃತ ಆಡಳಿತ ಮಂಡಳಿಯ ಸದಸ್ಯರ ಪಟ್ಟಿ/ಅಥವಾ ಠರಾವಿನ ನಕಲು ಮಹಾಮಂಡಳದ ಸದಸ್ಯತ್ವ ಪಡೆಯಲು ಪಾವತಿಸಿದ ಷೇರು ಹಣದ ರಶೀದಿಯ ಪ್ರತಿ ಇವುಗಳನ್ನು ಒಳಗೊಂಡಿರತಕ್ಕದ್ದು.

ವಿ.ಸೂ.1)ಅಪೂರ್ಣ ಪ್ರಸ್ತಾವೆಗಳನ್ನು ತಿರಸ್ಕರಿಸಲಾಗುವುದು,
2)ಸರ್ಕಾರದಿಂದ ಮಹಾಮಂಡಳಕ್ಕೆ ನೀಡಲಾಗುವ ಅನುದಾನದ ಲಭ್ಯತೆಗೆ ಅನುಸಾರವಾಗಿ ಅನುದಾನ ಮಂಜೂರು ಮಾಡಬೇಕಾಗಿರುವುದರಿಂದ ಮೊದಲು ಸ್ವೀಕೃತವಾದ ಅರ್ಹ ಅರ್ಜಿಗಳಿಗೆ ಆದ್ಯತೆ ನೀಡಲಾಗುವುದು.

ವ್ಯವಸ್ಥಾಪಕ ನಿರ್ದೇಶಕರು

 

 

ಅನುಬಂಧ-1

ವಾಣಿಜ್ಯ ಮೊಟ್ಟೆ ಕೋಳಿ ಘಟಕಗಳ ಮತ್ತು ಮಾಂಸಕೋಳಿ ಘಟಕಗಳ ಸ್ಥಾಪನೆಗೆ ಸಹಾಯಧನ ವಿವರಗಳು ಹಾಗೂ ಮಾರ್ಗಸೂಚಿಗಳು .

2017-18 ನೇ ಸಾಲಿನ ಆರ್,ಕೆ,ವಿ,ವೈ, ಯೋಜನೆಯಡಿ 100 ಫಲಾನುಭವಿಗಳಿಗೆ “1000-ಸಂಖ್ಯೆಯ ವಾಣಿಜ್ಯ ಮೊಟ್ಟೆ ಕೋಳಿ ಘಟಕಗಳನ್ನು ಹಾಗೂ 100 ಫಲಾನುಭವಿಗಳಿಗೆ 1000 ಸಂಖ್ಯೆಯ ಮಾಂಸ ಕೋಳಿ ಘಟಕಗಳನ್ನು ಸ್ಥಾಪಿಸಲು ತಲಾ ರೂ, 1,00 ಲಕ್ಷದಂತೆ ಒಟ್ಟೂ ರೂ,200.00 ಲಕ್ಷಗಳ ಸಹಾಯಧನವನ್ನು ಬ್ಯಾಂಕುಗಳ ಮೂಲಕ ವಿತರಿಸಲಾಗುವುದು, ಪ್ರಸಕ್ತ ಸಾಲಿನ ಆರ್.ಕೆ.ವಿ.ವೈ ಯೋಜನೆ ಅನುಷ್ಠಾನಕ್ಕಾಗಿ ಮಾರ್ಗಸೂಚಿ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರದಿಂದ ಅನುಮೋದನೆಗೊಂಡ ನಂತರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.

1000 ಸಂಖ್ಯೆಯ ಮೊಟ್ಟೆ ಕೋಳಿ ಘಟಕ

ಕ್ರ ಸಂ

ಕಂದಾಯ ವಿಭಾಗ

ಘಟಕದ ವೆಚ್ಚ
(ರೂ.ಲಕ್ಷಗಳಲ್ಲಿ)

ಬ್ಯಾಂಕಿನ ಸಾಲ/ ಸಂಘದ ವಂತಿಕೆ
(ರೂ.ಲಕ್ಷಗಳಲ್ಲಿ)

ಸಹಾಯಧನ
(ರೂ.ಲಕ್ಷಗಳಲ್ಲಿ)

ಘಟಕಗಳು

ಒಟ್ಟು ಸಹಾಯಧನ
(ರೂ.ಲಕ್ಷಗಳಲ್ಲಿ)

ಸಾ

ಪ.ಜಾ

ಪ.ಪಂ

ಒಟ್ಟು

1

ಬೆಂಗಳೂರು

5.50

4.50

1.00

3

17

5

25

25.00

2

ಮೈಸೂರು

5.50

4.50

1.00

3

17

5

25

25.00

3

ಬೆಳಗಾವಿ

5.50

4.50

1.00

3

17

5

25

25.00

4

ಕಲಬುರಗಿ

5.50

4.50

1.00

3

17

5

25

25.00

ಒಟ್ಟು

 

 

 

12

68

20

100

100.00


1000 ಸಂಖ್ಯೆಯ ಮಾಂಸ ಕೋಳಿ ಘಟಕ

ಕ್ರ ಸಂ

ಕಂದಾಯ ವಿಭಾಗ

ಘಟಕದ ವೆಚ್ಚ
(ರೂ.ಲಕ್ಷಗಳಲ್ಲಿ)

ಬ್ಯಾಂಕಿನ ಸಾಲ/ ಸಂಘದ ವಂತಿಕೆ
(ರೂ.ಲಕ್ಷಗಳಲ್ಲಿ)

ಸಹಾಯಧನ
(ರೂ.ಲಕ್ಷಗಳಲ್ಲಿ)

ಘಟಕಗಳು

ಒಟ್ಟು ಸಹಾಯಧನ
(ರೂ.ಲಕ್ಷಗಳಲ್ಲಿ)

ಸಾ

ಪ.ಜಾ

ಪ.ಪಂ

ಒಟ್ಟು

1

ಬೆಂಗಳೂರು

4.20

3.20

1.00

3

18

4

25

25.00

2

ಮೈಸೂರು

4.20

3.20

1.00

3

18

4

25

25.00

3

ಬೆಳಗಾವಿ

4.20

3.20

1.00

3

18

4

25

25.00

4

ಕಲಬುರಗಿ

4.20

3.20

1.00

2

18

4

25

25.00

ಒಟ್ಟು

 

 

 

11

72

16

100

100.00

ಮಾರ್ಗಸೂಚಿಗಳು,

  1. ಫಲಾನುಭವಿಗಳನ್ನು ಆಯಾ ಜಿಲ್ಲೆಯ ಇಲಾಖಾ ಉಪನಿರ್ದೇಶಕರ ನೇತೃತ್ವದಲ್ಲಿ ರಚಿಸಲಾದ ಸಮಿತಿ ಆಯ್ಕೆ ಮಾಡುವುದು ಆಯ್ಕೆ ಸಮಿತಿಯಲ್ಲಿ ಸಂಬಂಧಿಸಿದ ತಾಲ್ಲೂಕಿನ ಸಹಾಯಕ ನಿರ್ದೇಶಕರು ಸದಸ್ಯರಾಗಿತ್ತಾರೆ, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಪ್ರಾದೇಶಿಕ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಮಹಾಮಂಡಳದಲ್ಲಿ ಸದಸ್ಯತ್ವ ಹೊಂದಿರುವ ಕೋಳಿ ಸಾಕಾಣಿಕಾ ಸಹಕಾರ ಸಂಘದ ಸದಸ್ಯರಿಗೆ ಆದ್ಯತೆ ನೀಡುವುದು.
  2. ಫಲಾನುಭವಿಯ ಹೆಸರಿನಲ್ಲಿ ಕೋಳಿ ಶೆಡ್‍ನ್ನು ನಿರ್ಮಿಸಲು ಸ್ವಂತ ಜಾಗ ಇರತಕ್ಕದ್ದು,
  3. ಈ ಯೋಜನೆಯಡಿ ಸಾಲವನ್ನು ರಾಷ್ಟ್ರೀಕೃತ/ ಸಹಕಾರಿ/ ಶೆಡ್ಯೂಲ್ಡ್ ಬ್ಯಾಂಕ್‍ಗಳ ಮೂಲಕ ಒದಗಿಸಲಾಗುವುದು,
  4. ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲಾವಾರ ಗುರಿಗಳನ್ನು ಸರ್ಕಾರದಲ್ಲಿ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳಗನುಸಾರವಾಗಿ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳೆಯರಿಗೆ ಮೀಸಲಾತಿಯನ್ನು ಒದಗಿಸುವುದು.
  5. ಆಯ್ಕೆಯಾದ ಅರ್ಹ ಫಲಾನುಭವಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಮತ್ತು ಈ ಕೆಳಕಂಡ ದಾಖಲೆಗಳನ್ನು ಪಡೆದು ಸಹಾಯಧನದ ಬಿಡುಗಡೆಗೆ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಕೇಂದ್ರ ಕಛೇರಿಗೆ ಸಲ್ಲಿಸುವುದು.
    (1) ಭಾವಚಿತ್ರ ಸಹಿತದ ಗುರುತಿನ ಚೀಟಿ.
    (2) ವಿಳಾಸದ ದೃಢೀಕರಣದ ದಾಖಲೆ.
    (3) ಕೋಳಿ ಫಾರಂ ಕಟ್ಟಲು ಸ್ವಂತ ಜಮೀನು ಹೊಂದಿದ್ದಲ್ಲಿ ಆ ಜಮೀನಿನ ಆರ್.ಟಿ.ಸಿ ಪ್ರತಿ.
    (4) ಸ್ವಂತ ಜಮೀನು ಹೊಂದಿಲ್ಲದಿದ್ದ ಪಕ್ಷದಲ್ಲಿ ಕೋಳಿ ಫಾರಂ ಕಟ್ಟಲು ಉದ್ದೇಶಿಸಿರುವ ಜಮೀನಿನ ಮಾಲೀಕರಿಂದ ರೂ.100/- ಸ್ಟ್ಯಾಂಪ್ ಪೇಪರ್‍ನ ಒಪ್ಪಿಗೆ ಪತ್ರ ಮತ್ತು ಆ ಮಾಲೀಕರ ಜಮೀನಿನ ಆರ್.ಟಿ.ಸಿ ಪ್ರತಿ.
    (5) ಸ್ಥಳೀಯ ಸಂಸ್ಥೆಗಳಿಂದ ನಿರಾಪೇಕ್ಷಣಾ ಪತ್ರ.
    (6) ಕೋಳಿ ಸಾಕಾಣಿಕೆಯಲ್ಲಿ ತರಬೇತಿ ಹೊಂದಿದ್ದರೆ, ತರಬೇತಿ ಪ್ರಮಾಣ ಪತ್ರ.
    (7) ಸಂಬಂಧಿಸಿದ ಬ್ಯಾಂಕ್, ಇಲಾಖೆಯ ತಾಲ್ಲೂಕಿನ ಸಹಾಯಕ ನಿರ್ದೇಶಕರು ಹಾಗೂ ಮಹಾಮಂಡಳದ ಪ್ರಾದೇಶಿಕ ಸಹಾಯಕ ನಿರ್ದೇಶಕರಿಂದ ದೃಢೀಕೃತ Pಡಿe-ಡಿeಛಿeiಠಿಣನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸುವುದು.
    (8) ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಫಲಾನುಭವಿಗಳು ಜಾತಿ ಪ್ರಮಾಣ ಪತ್ರ ಲಗತ್ತಿಸುವುದು.
    (9) ಸಂಬಂಧಿಸಿದ ಬ್ಯಾಂಕುಗಳಿಂದ ಸಾಲ ಮಂಜೂರು ಮಾಡುವ ಕುರಿತು ಒಪ್ಪಿಗೆ ಪತ್ರ.
  6. ಈ ಯೋಜನೆಯನ್ನು ಅನುಷ್ಠಾನವನ್ನು ಒಂದು ಪ್ರದೇಶ / ಗ್ರಾಮದಲ್ಲಿ ಕನಿಷ್ಟ 5 ಫಲಾನುಭವಿಗಳು ಸಮೂಹವಾಗಿ ಅನುಷ್ಠಾನಗೊಳಿಸಿದಲ್ಲಿ ಆದ್ಯತೆ ನೀಡಲಾಗುವುದು.
  7. ಯೋಜನೆಯ ಅನುಷ್ಠಾನದ ಅನುಪಾಲನೆಯನ್ನು ಇಲಾಖೆಯ ಜಿಲ್ಲಾ ಉಪನಿರ್ದೇಶಕರು, ತಾಲ್ಲೂಕಾ ಸಹಾಯಕ ನಿರ್ದೇಶಕರು, ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ, ಪ್ರಾದೇಶಿಕ ಸಹಾಯಕ ನಿರ್ದೇಶಕರು ಹಾಗೂ ಬ್ಯಾಂಕ್ ಅಧಿಕಾರಿಗಳು ಮಾಡುವುದು.
  8. ಯೋಜನಾ ಉಪಯುಕ್ತತಾ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ.ನಿ, ಪ್ರಾದೇಶಿಕ ಸಹಾಯಕ ನಿರ್ದೇಶಕರು/ ತಾಲ್ಲೂಕು ಸಹಾಯಕ ನಿರ್ದೇಶಕರು ಬ್ಯಾಂಕ್‍ಗಳಿಂದ ಪಡೆದು ಕೆ.ಸಿ.ಪಿ.ಎಫ್ ನ ಕೇಂದ್ರ ಕಛೇರಿಗೆ ಸಲ್ಲಿಸುವುದು.
  9. ಫಲಾನುಭವಿಯು ಸದರಿ ವಾಸ ಸ್ಥಳದಲ್ಲಿ ಕುಕ್ಕುಟ ಕ್ಷೇತ್ರವನ್ನು ಸ್ಥಾಪನೆ ಮಾಡಲು ಪಂಚಾಯಿತಿಯ ಕಾರ್ಯದರ್ಶಿ / ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್.ಒ.ಸಿ) ಪಡೆದು ಸಲ್ಲಿಸುವುದು.

ವ್ಯವಸ್ಥಾಪಕ ನಿರ್ದೇಶಕರು